Monday, 5 December 2011

ನಿನಾಗಾಗಿ

ಮನದ  ಭಾವನೆಗಳು ಸಾಯುತಿವೆ
ಏಕೋ ಇಂದು,
ಕಾರಣವ ಹೇಳದೆ ನನ್ನಿಂದ
ಓಡುತಿವೆ ಇಂದು,

ನಾ ಅರಿಯದಾದೆ ಇಂದು
ನಾ ನನ್ನ,
ನೀ ಆವರಿಸಿರುವೆ
ನನ್ನ ಮೈ ಮನವ
ಬಾ ಬಿಡಿಸು ನನ್ನ ನೀ.

Wednesday, 23 November 2011

ಗೆಳೆಯನಿಗೊಂದು ನಮನ.

ಮನದಲ್ಲಿಂದೆಕೋ ನೀ ಕಾಡುತ್ತಿರುವೆ
ಕಾಡದಿರು ಗೆಳೆಯ ಮತ್ತೆಂದು ಹೀಗೆ.
ಯಾತನೆಯ ಹೇಳಲು ನಿನಿಲ್ಲ ಸನಿಹ
ಮನದ ದುಗುಡ ತಾಳಲಾರೆ ಹೀಗೆ.

ನನ್ನ ನೀ ಅರಿತು, ತಿದ್ದಿ ತೀಡಿ
ನೀ ಅರಿಸಿದೆ ನನಗೆ ನನ್ನ
ನಾ ಕಂಡುಕೊಂಡೆ ನಿನ್ನೊಳಗೆ ನನ್ನ
ಅದಕ್ಕಾಗಿ ನಿನಗೆ ಹೀಗೊಂದು ನಮನ