ಸುಮ್ಮನೆ office ಅಲ್ಲಿ ಕೂತಾಗ ನೆನಪಾಗಿದ್ದು blog update ಮಾಡಬೇಕು ಅಂತ ...... ಹಾಗೆ ಜೊತೆಯಲ್ಲಿ ಕಣ್ಮುಂದೆ ಬಂದಿದ್ದು ಬಾಲ್ಯ .......
ಎಷ್ಟು ಚಂದ ಅಲ್ವಾ ಆ ದಿನಗಳು ???? ಚಂದ ಮಾಮ ಕೈಗೆ ಸಿಗ್ತಾನೆ ಅನ್ನೋ ಕಲ್ಪನೆ , ಅಮ್ಮ ತಿನ್ನಿಸಿದ ತುತ್ತುಗಳು , ಅಪ್ಪ ಗದರಿಸಿದಾಗ ಆದ ಭಯ , ಆಗ ಅಜ್ಜಿ ತಾತ ನ support... chocolateಗಾಗಿ ಅಣ್ಣ ಹೇಳಿದ ಎಲ್ಲಾ ಕೆಲಸಗಳನ್ನು ಮಾಡೋದು . ಅವೆಲ್ಲ ಮಜಾನೇ ಬೇರೆ ಅಲ್ವಾ ????ಆ ಕನಸಿನ ಲೋಕದಲ್ಲಿ ನಾನೇ ರಾಜಕುಮಾರಿ ... ಮದುವೆ ಅಂದಾಗ ಕಣ್ಣಲ್ಲಿ ನೀರು ಆದರೆ ಎಲ್ಲೋ ಒಂದು ಕಡೆ ಕನಸಿತ್ತಲ್ವಾ?? ಏನೇ ಹೇಳಿದ್ರು ಆ ಕನಸುಗಳೇ ಚಂದ ...
ನಂಗಿನ್ನೂ ನೆನಪಿದೆ ನಮ್ಮನೆ ಬೆಕ್ಕಿನಮರಿ ಸತ್ತಾಗ ದಿನ ಇಡಿ ಅತ್ತಿದ್ದೆ ....... ಆ ದಿನಗಳೇ ಹಾಗೆ ಅತ್ತರೂ ಅಮ್ಮನ ಬೆಚ್ಚನೆಯ ಅಪ್ಪುಗೆ ..... ಸಂತ್ವಾನ , ಹಾಗೆ ಅಪ್ಪನ ವಾಗ್ದಾನ b'coz ಹೊಸ ಬೆಕ್ಕಿನಮರಿಗಾಗಿ .......
ಅಪ್ಪ ಬೈದಾಗೆಲ್ಲ ಮಧ್ಯ ಬಂದಿದ್ದು ಅಜ್ಜ .... ನನ್ನ ಮೊಮ್ಮಗಳಿಗೆ ಬೈತಿಯಾ ಅಂತ .... ಆಗ ನನ್ನದು ಪಿಸಿಪಿಸಿ ನಗೆ ಮಾತ್ರ ....... ಅಪ್ಪನು ಕಡಿಮೆ ಇಲ್ಲ ನಾನು ಗೆದ್ದಾಗ ಅಮ್ಮನಲ್ಲಿ ನನ್ನ ಮಗಳು ಅನ್ನೋ ಹೆಮ್ಮೆ , ಅಮ್ಮನದು ಮಾತ್ರ ನಿಷ್ಕಳಂಕ ಪ್ರೀತಿ ಗೆದ್ದರೂ ಸೋತರು ಅದೇ ಮಂದ ನಗು .....ಅಮ್ಮ ಹೊಡೆದಿದ್ದು ಬೈದಿದ್ದು ನನಪೆ ಇಲ್ಲಾ ..... ಎಲ್ಲೋ ಸಹಿಸಕ್ಕಾಗದಷ್ಟು ಕಾಟ ಕೊಟ್ಟಾಗ ಮಾತ್ರ .......
...... ಆದರೆ ಈಗ ಯಾವುದೇ ಕಿತಾಪತಿಗಳಿಲ್ಲ , ಚೇಷ್ಟೇಗಳಿಲ್ಲ ಅಷ್ಟೊಂದು ದೊಡದವರದ್ವಾ ನಾವು??? ಅಳು ಬಂದರೂ ಹೊರಗೆ ಬರದಷ್ಟು ಸಹಜತೆ ಅಪ್ಪ ಅಮ್ಮನಿಗೂ ಕೂಡ ಇರದಷ್ಟು time . miss ಮಾಡ್ಕೋತ ಇದಿವಿ ಅಂತಾ ಗೊತ್ತಿದ್ರು continue ಆಗೋ schedules ... stress , ಅಸಹಜ ನಗು , ಮುಗ್ದತೆಯೇ ಇಲ್ಲದ ಮುಖ .... ಸಾಕಪ್ಪ ಅನ್ನೋ life ...
ಮುಗ್ದತೆ ಮತ್ತೆ ಬರದೇ ಇಲ್ವಾ ??? life ನ ಕೊನೆ ತನಕ ಹೀಗೆ ಇರಬೇಕ ??? ಅನ್ನೋ ಸಾವಿರ ಪ್ರಶ್ನೆಗಳು !!! ಬದಲಾಗುವ ಮನಸಿದ್ದರು ಬದಲಾಗದ ಜೀವನ ...... once again want to celebrate my childhood .....
FINALLY Discovered the Answer to the question "what do you want to be when you grow up?"
ReplyDeleteThe Answer is " Small Again " ;)