Sunday, 17 March 2013

ಅಮ್ಮ.........

ಮನದ  ಮೊದಲ  ತೊದಲ 
ಮಾತು ಅದುವೇ  ನಿನ್ನ  ನಡತೆ ,
ಅಮ್ಮ  ಎಂಬ  ರೂಪದಿ 
ಎನಗೆ  ನಿನ್ನ ಸ್ವರೂಪ 

ಕಣ್ಣಂಚಿನ  ಕೊನೆಯ  ಹನಿಯ 
ಅರಿತ ನೀನು ನನ್ನ  ಬಾಳ  ದೀಪ ,
ತೀರಿಸಲಾರೆನು ಈ ಋಣವ 
ಮತ್ತೆಂದಿಗೂ ಈ ಜೀವವಿರುವ ತನಕ 

ಮೊದಲ ಮುತ್ತು ಮೊದಲ ತುತ್ತು 
ಇತ್ತ  ನಿನಗೆ ಸಾವಿರ ಧನ್ಯ ಪ್ರಾಣಮ್ಯ,
ಅಮ್ಮ ಎಂಬ  ಪದದ 
ಇನ್ನೊಂದು ಅರ್ಥ ಅದುವೇ ಸುನಂದ .........

Just Waiting for U



ಪ್ರೀತಿಸು ಒಮ್ಮೆ ನಲ್ಲ
ಜೀವನದಿ ಮರೆಯುವ ಮುನ್ನ
ಮೊಹಿಸು ಒಮ್ಮೆ ಇನಿಯ
ಈ ಜಾತ್ರೆಯಲಿ ಕಳೆಯುವ ಮುನ್ನ

ನಿನ್ನ ಸನಿಹಕೆ ಪರಿತಪಿಸಿದೆ ಮನಸ್ಸು
ಅದಾಗದ ಹೊತ್ತು ಮುದುಡಿದೆ ಕನಸ್ಸು
ಬಾ ಇನಿಯ ಒಮ್ಮೆ ಬಿಗಿದಪ್ಪಿ
ಮುದ್ದಾಡು ನಾ ಮರೆಯುವ ಮುನ್ನ ಈ ಜಗತ್ತು.

Tuesday, 5 March 2013

ಮತ್ತೊಮ್ಮೆ ...................

ಕೇಳದೆ ನಿನಗೀಗ 
ಬೇಸರದ  ಈ  ದನಿ 
ಮತ್ತೆ ಮತ್ತೆ ಕೂಗಿದೆ  ನಿನ್ನ 
ನೀ  ಬಾರದಾದೆ  ಇನ್ನ 

ತಪ್ಪಾಗಿದೆ  ಕ್ಷಮಿಸು 
ಎಂದಿದೆ  ಈ  ಮನ 
ಆದರೆ  ಅದ ಕೇಳಲು 
ನೀ  ಇಲ್ಲ  ಈ  ಸಮಯ