Sunday, 17 March 2013

ಅಮ್ಮ.........

ಮನದ  ಮೊದಲ  ತೊದಲ 
ಮಾತು ಅದುವೇ  ನಿನ್ನ  ನಡತೆ ,
ಅಮ್ಮ  ಎಂಬ  ರೂಪದಿ 
ಎನಗೆ  ನಿನ್ನ ಸ್ವರೂಪ 

ಕಣ್ಣಂಚಿನ  ಕೊನೆಯ  ಹನಿಯ 
ಅರಿತ ನೀನು ನನ್ನ  ಬಾಳ  ದೀಪ ,
ತೀರಿಸಲಾರೆನು ಈ ಋಣವ 
ಮತ್ತೆಂದಿಗೂ ಈ ಜೀವವಿರುವ ತನಕ 

ಮೊದಲ ಮುತ್ತು ಮೊದಲ ತುತ್ತು 
ಇತ್ತ  ನಿನಗೆ ಸಾವಿರ ಧನ್ಯ ಪ್ರಾಣಮ್ಯ,
ಅಮ್ಮ ಎಂಬ  ಪದದ 
ಇನ್ನೊಂದು ಅರ್ಥ ಅದುವೇ ಸುನಂದ .........

No comments:

Post a Comment