Thursday, 31 January 2013

ಸವಿ ಸವಿ ನೆನಪು

ಸುಮ್ಮನೆ  office ಅಲ್ಲಿ ಕೂತಾಗ  ನೆನಪಾಗಿದ್ದು blog update ಮಾಡಬೇಕು ಅಂತ ...... ಹಾಗೆ ಜೊತೆಯಲ್ಲಿ  ಕಣ್ಮುಂದೆ   ಬಂದಿದ್ದು ಬಾಲ್ಯ .......
ಎಷ್ಟು  ಚಂದ ಅಲ್ವಾ ಆ  ದಿನಗಳು ???? ಚಂದ ಮಾಮ ಕೈಗೆ  ಸಿಗ್ತಾನೆ ಅನ್ನೋ  ಕಲ್ಪನೆ , ಅಮ್ಮ ತಿನ್ನಿಸಿದ ತುತ್ತುಗಳು , ಅಪ್ಪ ಗದರಿಸಿದಾಗ  ಆದ ಭಯ , ಆಗ ಅಜ್ಜಿ ತಾತ ನ support... chocolateಗಾಗಿ ಅಣ್ಣ  ಹೇಳಿದ ಎಲ್ಲಾ  ಕೆಲಸಗಳನ್ನು  ಮಾಡೋದು . ಅವೆಲ್ಲ ಮಜಾನೇ  ಬೇರೆ ಅಲ್ವಾ ????ಆ  ಕನಸಿನ ಲೋಕದಲ್ಲಿ ನಾನೇ ರಾಜಕುಮಾರಿ ...  ಮದುವೆ ಅಂದಾಗ  ಕಣ್ಣಲ್ಲಿ  ನೀರು ಆದರೆ ಎಲ್ಲೋ ಒಂದು ಕಡೆ ಕನಸಿತ್ತಲ್ವಾ?? ಏನೇ ಹೇಳಿದ್ರು  ಆ  ಕನಸುಗಳೇ  ಚಂದ ...
 ನಂಗಿನ್ನೂ  ನೆನಪಿದೆ ನಮ್ಮನೆ  ಬೆಕ್ಕಿನಮರಿ ಸತ್ತಾಗ ದಿನ ಇಡಿ ಅತ್ತಿದ್ದೆ .......  ಆ ದಿನಗಳೇ  ಹಾಗೆ  ಅತ್ತರೂ ಅಮ್ಮನ  ಬೆಚ್ಚನೆಯ ಅಪ್ಪುಗೆ ..... ಸಂತ್ವಾನ , ಹಾಗೆ ಅಪ್ಪನ ವಾಗ್ದಾನ b'coz  ಹೊಸ  ಬೆಕ್ಕಿನಮರಿಗಾಗಿ .......
ಅಪ್ಪ ಬೈದಾಗೆಲ್ಲ  ಮಧ್ಯ  ಬಂದಿದ್ದು ಅಜ್ಜ .... ನನ್ನ  ಮೊಮ್ಮಗಳಿಗೆ  ಬೈತಿಯಾ ಅಂತ .... ಆಗ ನನ್ನದು ಪಿಸಿಪಿಸಿ ನಗೆ ಮಾತ್ರ ....... ಅಪ್ಪನು ಕಡಿಮೆ ಇಲ್ಲ ನಾನು  ಗೆದ್ದಾಗ ಅಮ್ಮನಲ್ಲಿ ನನ್ನ ಮಗಳು ಅನ್ನೋ ಹೆಮ್ಮೆ , ಅಮ್ಮನದು ಮಾತ್ರ ನಿಷ್ಕಳಂಕ  ಪ್ರೀತಿ  ಗೆದ್ದರೂ ಸೋತರು ಅದೇ ಮಂದ ನಗು .....ಅಮ್ಮ ಹೊಡೆದಿದ್ದು ಬೈದಿದ್ದು  ನನಪೆ ಇಲ್ಲಾ ..... ಎಲ್ಲೋ ಸಹಿಸಕ್ಕಾಗದಷ್ಟು ಕಾಟ ಕೊಟ್ಟಾಗ ಮಾತ್ರ .......
...... ಆದರೆ  ಈಗ  ಯಾವುದೇ  ಕಿತಾಪತಿಗಳಿಲ್ಲ , ಚೇಷ್ಟೇಗಳಿಲ್ಲ  ಅಷ್ಟೊಂದು  ದೊಡದವರದ್ವಾ  ನಾವು??? ಅಳು  ಬಂದರೂ ಹೊರಗೆ ಬರದಷ್ಟು ಸಹಜತೆ ಅಪ್ಪ ಅಮ್ಮನಿಗೂ ಕೂಡ ಇರದಷ್ಟು time . miss ಮಾಡ್ಕೋತ ಇದಿವಿ  ಅಂತಾ  ಗೊತ್ತಿದ್ರು  continue  ಆಗೋ schedules ... stress , ಅಸಹಜ  ನಗು , ಮುಗ್ದತೆಯೇ  ಇಲ್ಲದ ಮುಖ .... ಸಾಕಪ್ಪ ಅನ್ನೋ life ...
ಮುಗ್ದತೆ ಮತ್ತೆ ಬರದೇ  ಇಲ್ವಾ ??? life ನ ಕೊನೆ ತನಕ ಹೀಗೆ ಇರಬೇಕ ??? ಅನ್ನೋ ಸಾವಿರ ಪ್ರಶ್ನೆಗಳು !!! ಬದಲಾಗುವ ಮನಸಿದ್ದರು ಬದಲಾಗದ ಜೀವನ ...... once  again want  to celebrate my childhood .....

Monday, 5 December 2011

ನಿನಾಗಾಗಿ

ಮನದ  ಭಾವನೆಗಳು ಸಾಯುತಿವೆ
ಏಕೋ ಇಂದು,
ಕಾರಣವ ಹೇಳದೆ ನನ್ನಿಂದ
ಓಡುತಿವೆ ಇಂದು,

ನಾ ಅರಿಯದಾದೆ ಇಂದು
ನಾ ನನ್ನ,
ನೀ ಆವರಿಸಿರುವೆ
ನನ್ನ ಮೈ ಮನವ
ಬಾ ಬಿಡಿಸು ನನ್ನ ನೀ.

Wednesday, 23 November 2011

ಗೆಳೆಯನಿಗೊಂದು ನಮನ.

ಮನದಲ್ಲಿಂದೆಕೋ ನೀ ಕಾಡುತ್ತಿರುವೆ
ಕಾಡದಿರು ಗೆಳೆಯ ಮತ್ತೆಂದು ಹೀಗೆ.
ಯಾತನೆಯ ಹೇಳಲು ನಿನಿಲ್ಲ ಸನಿಹ
ಮನದ ದುಗುಡ ತಾಳಲಾರೆ ಹೀಗೆ.

ನನ್ನ ನೀ ಅರಿತು, ತಿದ್ದಿ ತೀಡಿ
ನೀ ಅರಿಸಿದೆ ನನಗೆ ನನ್ನ
ನಾ ಕಂಡುಕೊಂಡೆ ನಿನ್ನೊಳಗೆ ನನ್ನ
ಅದಕ್ಕಾಗಿ ನಿನಗೆ ಹೀಗೊಂದು ನಮನ